‘ಸಂಗ’ ಜೀವನವಿವರಗಳನ್ನು ಒಂದೇ ಓಟದಲ್ಲಿ ನಿರೂಪಿಸುವ ಆತ್ಮಕಥೆಯಲ್ಲ, ಅದು ಬಿಡಿ ಪ್ರಸಂಗಗಳ ಮೂಲಕ ಆತ್ಮಕಥನದ ಜತೆಗೆ ಇನ್ನೂ ಹೆಚ್ಚಿನ ಅರ್ಥವಂತಿಕೆಯನ್ನು ಸಾಧಿಸುವಂಥದು.ಲೇಖಕರು ಓದುಗರೊಂದಿಗೆ ಮನಬಿಚ್ಚಿ ಆತ್ಮೀಯವಾಗಿ ಮಾತಾಡಿದಂಥ ನಿರೂಪಣೆ. ಪುಸ್ತಕವು ಮುಗಿದದ್ದೇ ಅರಿವಿಗೆ ಬರದಂತೆ ಓದಿಸಿಕೊಳ್ಳುತ್ತದೆ, ಅನುಭವದ ಗುಂಗಿನಲ್ಲಿಯೇ ಚಲನಶೀಲವಾಗಿ  ನಿಲ್ಲಿಸುತ್ತದೆ. ಮಹಾಲಿಂಗಂ ಅವರ ಆತ್ಮಕಥೆಯ ಮಾದರಿಯದು,ಅದರ ಸಾಟಿಯಾಗಿ ನಿಲ್ಲುವಂಥದು.
                                                                                            ವಿ.ಟಿ.ದೊರೆಸ್ವಾಮಿ(೯೩), ಶಿಕ್ಷಣತಜ್ನರು   ೩.೭.೨೦೧೬