'ಆಸುಪಾಸು'ವಿನಲ್ಲಿ ಪ್ರಬಂಧಕಾರ, ಕವಿ, ಮನಶ್ಹಾಸ್ತ್ರಜ್ಣ, ಚಿಂತಕ, ಶಿಕ್ಷಣವೇತ್ತನಾಗಿ ಕಾಣಿಸಿಕೊಂಡಿದ್ದೀರಿ. ಮೈಯೆಲ್ಲಾ ಕಣ್ಣು; ಅಷ್ಟು ಸೂಕ್ಷ್ಮವಾಗಿ ಗಮನಿಸಬಲ್ಲವರು. ಬೆಕ್ಕಿನಬಗೆಗೇ ಒಂದು ಪುಸ್ತಕ ಬರೆಯಬಹುದು. ಅಲಿಸ್, ವೃತ್ತದಂಚಿನ ಮರದ ಕೆಳಗೆ... ಭಾಷೆಯಮೇಲೆ ಹಿಡಿತವಿದ್ದರೆ ಎಂಥ ಸಣ್ಣ ಸಂಗತಿಯನ್ನಾದರೂ ಸೊಗಸಾಗಿ ಚಿತ್ರಿಸಬಹುದೆಂಬುದಕ್ಕೆ ಸಾಕ್ಷಿ. ಅಮೆರಿಕದ ಪ್ರಿ-ಸ್ಕೂಲ್ ಸಿಲಿಬಸ್ ಕೊಟ್ಟು ಭಾರತೀಯರಲ್ಲಿ ಬೆರಗು ಮೂಡಿಸಿದ್ದೀರಿ. ಕನ್ನಡದಲ್ಲಿ ಬಂದಿರುವ ಪ್ರವಾಸಕಥನಗಳಲ್ಲೇ ಚೆನ್ನಾಗಿದೆ.
ವಿ.ಟಿ.ದೊರೆಸ್ವಾಮಿ, ಶಿಕ್ಷಣತಜ್ಣರು, ಮೈಸೂರು. ೫.೫.೨೦೧೬